Submission 5764

ಇಬ್ಬನಿ

ರಚನೆ : ಮಂಜುನಾಥ ಮಲ್ಲೇಶಪ್ಪ ಬಡಿಗೇರ

----------------------------------

ಮುಂಜಾನೆಯ ನಸುಕಿನಲಿ ಬರುತಿರುವೆ ವಿಪರೀತ ಚಳಿಯಾಗಿ ಎಲ್ಲರನು ನಡುಗಿಸುತಾ ಸಾಗುತಿರುವೆ ನೀ, ಓ.. ಇಬ್ಬನಿಯೇ.. ಮುಂಜಾನೆಯ ಮಂಜಿನ ಹನಿಗಳ ಸುರಿಸುತಾ ಎಲ್ಲರನು ತಂಪಿನಲಿ ನೆನೆಸುತಾ ನಡುಗಿಸುತಾ ಸಾಗುತಿರುವೆ ನೀ, ಓ.. ಇಬ್ಬನಿಯೇ.. ಮುಂಜಾನೆಯ ಇಬ್ಬನಿ ಹನಿಗಳ ಭೂಮಿಗೆ ತಾಗಿಸುತಾ ರೈತನ ಬೆಳೆಗಳಿಗೆ ಜೀವ ನೀಡುತಾ ಪೋಷಿಸುತಾ ಸಾಗುತಿರುವೆ ನೀ, ಓ.. ಇಬ್ಬನಿಯೇ.. ಮುಂಜಾನೆಯ ನಸುಕಿನಲಿ ಬೆಟ್ಟಗುಡ್ಡಗಳಲಿ ಹಬ್ಬುತಾ ನೋಡುಗರ ಕಣ್ ಮನ ಸೆಳೆದು ರಸದೌತಣ ನೀಡುತಾ ಸಾಗುತಿರುವೆ ನೀ, ಓ.. ಇಬ್ಬನಿಯೇ.. ಮುಂಜಾನೆಯ ಸೂರ್ಯನ ಕಿರಣಗಳಿಗೆ ನಯವಾಗಿ ಕರಗುತಾ ಸರಿಯುತಾ ಸಾಗುತಿರುವೆ ನೀ, ಓ.. ಇಬ್ಬನಿಯೇ..

----------------------------------

ನೋಂದಣಿ ಐಡಿ : KPFS2-9064

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top