ಅಮೃತ ಮಹೋತ್ಸವ
ರಚನೆ : ಬಾಲಾಜಿ
----------------------------------
ಜನ ಮನ ಗೆಲ್ಲುವ ನನ್ನ ದೇಶ, ಭಾರತ ಮಾತೆಯ ಮಾತಿನ ಆದೇಶ, ಪಾಲಿಸ್ರೋ ನನ್ನ ಹುಚ್ಚಪ್ಪಗಳಿರ ನಿಮ್ಮ ತ್ಯಾಗ ಬಲಿದಾನ ಬೇಕಿಲ್ಲ, ನಿಮ್ಮ ಹಾರಾಟ-ಹೋರಾಟ ಬೇಕಿಲ್ಲ ಏಕತೆಯಿಂದ ಮುನ್ನಡೆಯಿರೋ ಓ ನನ್ನ ಹುಚ್ಚಪ್ಪಗಳಿರ ಬೆಳಗಾದ್ರೇ ಕುತಂತ್ರಗಳಿಂದ ಅಲೆಯುವ ನೀವೆಲ್ಲಿ ಸ್ವರಾಜ್ಯ ಪಡೆಯುವವರೆಗೂ ಪಟ್ಟು ಬಿಡದ ಅವ್ರೇಲ್ಲಿ ದೇಶಪ್ರೇಮಿಗಳನೋಮ್ಮೇ ಮನದಲ್ಲಿ ಸ್ಮರಿಸ್ರೋ ನನ್ನ ಹುಚ್ಚಪ್ಪಗಳಿರ ರಾಜಕೀಯ ಕುತಂತ್ರಗಳನ್ನು ಕೈ ಬಿಡ್ರಿ ದೇಶಕ್ಕಾಗಿ ಮುನ್ನುಗ್ಗುವ ನಾಯಕರ ಕೈ ಹಿಡಿಯಿರಿ ಆಗ ಪ್ರತಿದಿನವೂ ಅಮೃತ ಮಹೋತ್ಸವವೇ ಕಣ್ರೋ ನನ್ನ ಹುಚ್ಚಪ್ಪಗಳಿರ.
----------------------------------
ನೋಂದಣಿ ಐಡಿ : KPFS2-9062