ನನ್ನವಳಾಕೆ
ರಚನೆ : ವಿದ್ಯಾಧರಯ್ಯ ಆರ್. ಸೊಪ್ಪಿಮಠ
----------------------------------
ನಿರಾಶೆಯ ಮನಕೆ ಸ್ಪೂರ್ತಿಯ ಸೆಲೆಯಾದಾಕೆ ದುಃಖದ ತುಕ್ಕಿಗೆ ಸುಖದ ಸುವರ್ಣ ಲೇಪಿಸಿದಾಕೆ ಸ್ನೇಹದ ಬುತ್ತಿಯ ಹೊತ್ತು ತಂದಾಕೆ ಪ್ರೀತಿಯ ಸಿಹಿ ಸೊಗದ ತುತ್ತನಿತ್ತಾಕೆ.. ನನ್ನವಳಾಕೆ ಕಲ್ಲು ಹೃದಯದಿ ಚಿತ್ತಾರ ಕೆತ್ತಿದಾಕೆ ಬರಿಯ ಬಾಳ ಪುಟದಿ ರಂಗಿನ ಚಿತ್ರ ಬಿಡಿಸಿದಾಕೆ ಭವಿಷ್ಯತ್ತಿನ ಇರುಳಿಗೆ ಭರವಸೆಯ ಬೆಳಕನಿತ್ತಾಕೆ ಒಡೆದ ಹೃದಯವ ಹೊಲಿದು ಗಟ್ಟಿ ಗೂಡ ಕಟ್ಟಿದಾಕೆ.. ನನ್ನವಳಾಕೆ ಬೆಟ್ಟದಾಸೆಗಳ ತುಂಬಿ ಬಾಳ ಬತ್ತಿ ಹೊಸೆದಾಕೆ ಹೃದಯದಿಂದೆದ್ದು ತುಟಿಯ ಮೇಲೆ ನಕ್ಕಾಕೆ ಲೆಕ್ಕಣಿಕೆಯ ತೆಕ್ಕೆಗೆ ಒಕ್ಕಣಿಕೆಯಾದಾಕೆ ಬಿಳಿ ಹಾಳೆಯ ಮೇಲೆ ಸುಖ ನಿದ್ರಿಸುವಾಕೆ.. ನನ್ನವಳಾಕೆ ಈ ನಾನು ಆ ಆಕೆ ಯಾರೆಂದು ಚಿಂತಿಸುವಿರೇಕೆ? ಈ ನಾನು ನನ್ನ ʼಒಳಗುʼ ಆ ಆಕೆ ನನ್ನೊಳವಿತ ʼಕವನಿಕೆʼ ಬೇಕಿಲ್ಲ ಎನಗೆ ಬೇರೆ ಕನವರಿಕೆ.. ಸಾಕೆನೆಗೆ ನಾನು ನನ್ನ ಕವನಿಕೆ!
----------------------------------
ನೋಂದಣಿ ಐಡಿ : KPFS2-9055