ಜೀವನ ಸಾರ
ರಚನೆ : ಸೀತಾಲಕ್ಷಿ. ಎನ್
----------------------------------
ದಾರಿ ಎಲ್ಲಿಗೋ ಸಾಗುತಿದೆ ಪಯಣ ಎಲ್ಲಿಗೋ ತಿಳಿಯದಾಗಿದೆ॥ ಓಡುತಿದೆ ಜಗವು ಒಳಮರ್ಮ ಅರಿಯದೆ ಮೋಸ ವಂಚನೆಯ ಬೆನ್ನತ್ತಿದೆ ರೋಷದ್ವೆಷಗಳ ಅಟ್ಟಹಾಸವಿದೆ ಬಡತನದ ಬೇಗೆ ತಂಡವಿಸಿದೆ ॥ ದಾರಿ ಎಲ್ಲಿಗೋ ಸಾಗುತಿದೆ॥ ಪ್ರಕೃತಿಯೊಡನೆ ಮಾನವನ ಹೋರಾಟವಿದೆ ದುರಾಸೆಯ ಪರಮಾವಧಿ ತಲುಪಿದೆ ಸ್ಪರ್ಧೆಯಲಿ ಓಡುವುದು ಕನಸಾಗಿದೆ ತನಗೆ ಅರಿವಿಲ್ಲದೆ ಮನಸು ಭಾರವಾಗಿದೆ ॥ದಾರಿ ಎಲ್ಲಿಗೋ॥ ಮಹಾವಾರಿಯ ದಾಹಕೆ ಬಲಿಯಿದೆ ಕಲಿತರೆ ಮನುಷ್ಯತ್ವದ ಪಾಠವಿದೆ ನೀನು ತೃಣ ಮಾತ್ರವೆಂಬ ಸಾರವಿದೆ ಎಲ್ಲಾ ನೀ ಅರಿತರೆ ಪರಮಾತ್ಮನ ಸಾನ್ನಿಧ್ಯವಿದೆ ॥ದಾರಿ ಎಲ್ಲಿಗೋ ॥
----------------------------------
ನೋಂದಣಿ ಐಡಿ : KPFS2-8997