Submission 5632

ಗಂಡೇ ಶಿವ ಹೆಣ್ಣು ಶಿವೆ

ರಚನೆ : ಗಣೇಶ್ ಬಿ. ಸಿ

----------------------------------

ಕೈಲಾಸ ಶಿಖರ ಶೃಂಗದಲ್ಲಿ ಸ್ಮಶಾನ ಕಾಯ್ವ ಯೋಗಿಯಲ್ಲಿ ಸಮಾಧಿಗೊಲಿದ ವಿರಾಗಿಯಲ್ಲಿ ಮನಸೋತಳು ಮಾನಸಿ, ಹಿಮಪರ್ವತದ ಊರ್ವಶಿ. ತಪಂಗೈದು ಪಡೆದಳದೋ ಚರ್ಮಾಂಬರಧರನ ಸೋಲದಿಹನೆ ಹೇಳು ಶಂಭು ಶಕ್ತಿ ತಪಂಗೈಯ್ಯಲು ?! ತುಳಿದನದೋ ಸಪ್ತಪದಿ , ದೇವದಾನವ ಪ್ರಿಯ, ಮೂರುಗಂಟು ಹರನ ನಂಟು, ಶಿವೆಗಲ್ಲದೆ ಯಾರಿಗುಂಟು?! ಗಂಡೇ ಶಿವ, ಹೆಣ್ಣು ಶಿವೆ ! ಅದುವೆ ಪ್ರೇಮ ರಸಸ್ವರ ಒಂದುಗೂಡಿದೊಡನೆ ಅರ್ಧನಾರೀಶ್ವರ!

----------------------------------

ನೋಂದಣಿ ಐಡಿ : KPFS2-8985

0
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top