ಅಪ್ಪ
ರಚನೆ : ಉತ್ತಮ ಎ. ದೊಡ್ಮನಿ
----------------------------------
ಅಪ್ಪ ಸದಾ ಮೌನಿ ದಾರಿ ತಪ್ಪದಿರಲೆಂದು ಲಕ್ಷ್ಮಣ ರೇಖೆ ಎಳೆದವ ಸುಖಗಳು ಮರೆತು ನೆಲ ದಾಟಿ ಬದುಕಿಗಾಗಿ ಊರೂರ ಸುತ್ತಿದವ ಅಪ್ಪ ಗಣಿತ ಪಾಠವಿದ್ದಂತೆ ಒಮ್ಮೆಲೆ ಅರ್ಥವಾಗದೆ ಸಮಸ್ಯೆಗೆ ಉತ್ತರವಾದವ ಶಾಲೆ ದಾರಿಯನ್ನು ನೋಡದೆ ಸ್ವಾಭಿಮಾನದ ಬೀಜ ಬಿತ್ತಿ ಸರದಾರನಾದವ ಗೆದ್ದಾಗ ಹಿಗ್ಗುತ ನೋವುಗಳು ತೋರ್ಪಡದೆ ಒಳಗೊಳಗೆ ಕಣ್ಣೀರು ಹಾಕಿದವ
----------------------------------
ನೋಂದಣಿ ಐಡಿ : KPFS2-8930