ಹೆಣ್ಣಾಗಿ ಹುಟ್ಟು ಆದರೆ ?
ರಚನೆ : ಪೂರ್ಣಿಮಾ ಶಿವಶಂಕರ್
----------------------------------
ವರ್ಷಧಾರೆಯ ಮಂದಹಾಸದಲಿ , ಹೆಣ್ಣಾಗಿ ಹುಟ್ಟು ಆದರೆ, ತಾಯಿ, ತಂದೆ ಭಾಂದವ್ಯಗಳೊಂದಿಗೆ ಬೆಳೆದು ಕಾಮುಕ ಮೃಗಗಳಿಗೆ ಬಲಿಯಾಗದಂತೆ ಬದುಕು . ಮನವರಿವ ಇನಿಯನ ಬರಹದಲ್ಲಿ ಪಡೆದು, ಸಹನೆ, ವಾತ್ಸಲ್ಯ, ಮಾನವೀಯತೆಯ ಮೌಲ್ಯವೊಂದಿ, ಕಷ್ಟ, ದೌರ್ಜನ್ಯಗಳ ಅಸಹಾಯಕತೆಯಲ್ಲಿ ಕುಗ್ಗಬೇಡ. ಸಜ್ಜನಿಕೆಯ ಚಾರಿತ್ರ್ಯವ ಹೊಂದಿ, ತನ್ನ ಮಕ್ಕಳೊಂದಿಗೆ ನಾಲ್ಕು ಬದುಕಿಗೆ ಆಸರೆಯಾಗಿ, ಬದುಕುವುದ ಹೊರತು ಸಮಾಜಕ್ಕೆ ಹೊರೆಯೆನಿಸಬೇಡ. ಅನ್ಯ ತಾಯಿ, ತಂದೆ, ಹಿರಿಯರು ನಿನ್ನ ಬಿಂಬದಲಿ, ತಮ್ಮ ಮಕ್ಕಳ ಪ್ರತಿಬಿಂಬವ ಕಾಣುವಂತೆ, ಮೂರ್ತಿ ರೂಪವಾಗಿ ಮನೆತನ ಬೆಳಗಿ ಭದ್ರಿಸು. ಸಾರ್ಥಕದ ಕೊನೆ ಮೆಟ್ಟಿಲಿನಲ್ಲಿ ಮಿನುಗುತ್ತಿರಬೇಕು ಹೆಣ್ಣಾಗಿ ಹುಟ್ಟಿದ ನೀ. ಧರ್ಮಜ್ಯೋತಿಯಂತೆ.
----------------------------------
ನೋಂದಣಿ ಐಡಿ : KPFS2-8920