ಮೌನವನ್ನು ಮಾತಾಗಿಸುವ ಜ್ವಾಲೆ
ರಚನೆ : ಪಲ್ಲವಿ ಕೆ ಎಸ್
----------------------------------
ಇದ್ದರೂ ಕಾಲಹರಣಕ್ಕೆ ಹತ್ತಾರು ಹವ್ಯಾಸ ಎರಡು ಸಾಲು ಗೀಚುವುದರಲ್ಲಿದೆ ಎಲ್ಲಿಲ್ಲದ ಸಂತಸ ನನ್ನನ್ನೇ ನಾನು ಮರೆತು ಹೋದ ಭಾವ ಹಂಚಿಕೊಳ್ಳಲು ಪುಸ್ತಕದೊಂದಿಗೆ ನನ್ನೆಲ್ಲ ನೋವು ನಲಿವ ಭಾವನೆಗಳೇ ಬರವಣಿಗೆಯ ಆಸ್ತಿ ಜೀವನಾನುಭವವೇ ಅದರ ಸ್ಪೂರ್ತಿ ಮಾಡಬೇಕೆನಿಸುವುದು ಖಾಲಿ ಹಾಳೆಗಳ ಭರ್ತಿ ಮನದ ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ಹಚ್ಚೊತ್ತಿ ಮನದ ಅನಿಸಿಕೆಗಳನ್ನು ಪುಸ್ತಕದಲ್ಲಿ ವರ್ಣಿಸಲು ಪಡೆದಿರುವೆ ಶಬ್ದ ಭಂಡಾರದ ಎರವಲು ಹೃದಯ ಮೆದುಳು ಸೇರಿದಾಗ ಹುಟ್ಟುವುದೇ ಕವನ ಸಾರ್ಥಕವಾದೀತು ಈ ಬರಹ ಸೆಳೆದರೆ ಅದು ಓದುಗರ ಕಣ್ಮನ
----------------------------------
ನೋಂದಣಿ ಐಡಿ : KPFS2-8911