Submission 5526

ನನ್ನಯ ಚೆಲುವಿನ ನಾಡು

ರಚನೆ : ಭಾಗ್ಯಲಕ್ಷ್ಮಿ ಟಿ

----------------------------------

ಹೊನ್ನಿನ ನಾಡು ರನ್ನದ ಬೀಡು ಶ್ರೀಗಂಧದ ತವರು ನನ್ನ ನೆಚ್ಚಿನ ನಾಡು ಸಹ್ಯಾದ್ರಿಯ ಮಡಿಲ ಸಂಜೀವಿನಿ ನೋಡು ನದಿ ತೊರೆಗಳ ಜಲ ನಿನಾದದ ಹಾಡು ತುಂಗಭದ್ರಾ ಕಾವೇರಿ ದಾಹವ ತಣಿಸಿ ಶರಾವತಿಯು ಬೆಳಕನು ಹರಿಸಿ ಹಂಪೆಯ ಗತವೈಭವ ಮರುಕಳಿಸಿ ಸಾಗರದಲೆಗಳ ನರ್ತನ ಮನವನು ತಣಿಸಿ ಪಂಪ ರನ್ನ ಪೊನ್ನರ ಅಭಿಮಾನದ ಸೂರು ಬಸವ ಅಕ್ಕ ಅಲ್ಲಮ ಶರಣರ ತವರೂರು ದಾಸರ ಪದಗಳ ಪ್ರೌಢಿಮೆ ನೋಡು ಕವಿಗಳ ರಸಕಾವ್ಯದ ಮೋಹದ ಜಾಡು ದೇವನ ಕುಂಚದ ಕಲಾ ಸೊಬಗು ಇದುವೇ ಕರುನಾಡಿನ ನೋಟದ ಮೆರುಗು

----------------------------------

ನೋಂದಣಿ ಐಡಿ : KPFS2-8909

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top