ಮಳೆ
ರಚನೆ : ಸಿ ಜಿಲಾನ್ ಮಾಲವಿ
----------------------------------
ಉತ್ತರಿ ಮಳೆ ಉಸಿರನೊತ್ತು ಮುಂಬಾಗಿಲ ಸೀಳಿ ಚೆಲ್ಲಿದೆ. ಅಶ್ಮಮೃದು ಮೈಗೆ ಹನಿ ಮೇಣ. ಮೋಡ ಕಪ್ಪುಗರ್ಭವು ಬಸಿದು ಭರಿಸಿ ಬಿಸಿ ಜಲಪಾತಗಳನೆಲ್ಲ. ನೀರ್ಬಂಡೆಗಳ ರಂಗೋಲಿಯ ಅಳಿಸಿ, ಗಳಿಸಿ ನಿರ್ಭೀತಿಯನು. ಇಳೆಯಂಬರದಿ ತಣಿವ ದೈತ್ಯ ದ್ಯೂತದಾಟಕ್ಕೆ ನಭದ ರಂಗು. ಬೆಳೆ, ಬೀಳು, ಕಲ್ಲಹೊಲವಾಡಿತ್ತು ವಿಸ್ತಾರ ಸಿಹಿ ಜೇನಿನ ಹಾಡು. ಅಂಗಳವೆಲ್ಲಾ ಮೇಯ್ದ ಮಳೆಗಿನ್ನೂ ಆರದ ಆವರಿಸುವ ಹದದ ದಾಹ. ಜೋತುಬಿದ್ದ ಮೋಡಗಳನೆಲ್ಲವನು ಬೆಟ್ಟದವ್ವ ತಬ್ಬಿ ಹಿಡಿದು ಸಂತೈಸಿಹಳು.
----------------------------------
ನೋಂದಣಿ ಐಡಿ : KPFS2-8905