Submission 5510

ಕನ್ನಡಮ್ಮನ ಸೇವೆ

ರಚನೆ : ಸೌಮ್ಯ ಪ್ರಸಾದ್

----------------------------------

ಅಂಜುತ ಕುಳಿತರೆ ಗೆಲುವೆವೆ ನಾವು ಹೆಜ್ಜೆಯನೂರುತ ಮುಂದಕೆ ಸಾಗೋಣ ಕನ್ನಡತಾಯಿಯ ಸೇವೆಯ ಮಾಡೋಣ ಅಕ್ಷರ ಸಾಗರದೊಳೀಜುತ ದಿನವು ಪದಗಳ ತೇರನು ಕಟ್ಟುತ ಎಳೆಯೋಣ ಭಾವಶರಧಿಯಲಿ ಮುಳುಗೇಳುತಲಿ ದೇವನಿತ್ತ ಜಾನಕೆ ಕರಮುಗಿಯುತಲಿ ಸದಮಲದಿ ತಾಯಿಗೆ ಜೈಜೈ ಎನ್ನೋಣ ಜಡಮತಿ ಬುದ್ಧಿಯ ಮಳೆಯಲಿ ನೆನೆಯಲು ಅರಿವಿನ ಸುಮವರಳಿ ಘಮಘಮಿಸುವುದು ತೊರೆಯದೆ ಹಿಡಿದಿಹ ಪಥದಲಿ ಸಾಗಲು ಮರೆವಿನ ತಾಣದಿ ಜ್ಞಾನಜ್ಯೋತಿ ಬೆಳಗುವುದು ಕನ್ನಡಸೇವೆಯ ಯಜ್ಞಕೆ ಸಮಿತ್ತು ನಾವಾಗೋಣ ಭುವನೇಶ್ವರಿ ಹೆಸರನು ದೇಶದೇಶದಿ ಬೆಳಗೋಣ

----------------------------------

ನೋಂದಣಿ ಐಡಿ : KPFS2-8895

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top