ಹರಿವ ನೀರು - ಉರಿವ ಕೆಂಡ
ರಚನೆ : ಸೋಮನಾಥ ದೊಡ್ಡಿ
----------------------------------
ಹರಿವ ನೀರು - ಉರಿವ ಕೆಂಡ ಎರಡೂ ಕಣ್ಣುಗಳಲ್ಲಿವೆ ಯುದ್ಧದ ಆತುರ - ಶಾಂತಿಯ ಸಾವಧಾನ ಆಚಾರ ಶೃಂಗ ರಂಗಗಳಲ್ಲಿವೆ ಸೂರ್ಯನ ಪ್ರಖರ ಬೆಳಕು - ಚಂದ್ರನ ಬೆಳದಿಂಗಳು ಬ್ರಹ್ಮಾಂಡದ ಪಿಂಡಾಂಡದಲ್ಲಿವೆ ಪ್ರಕೃತಿಯ ಚಿಗುರು - ಪುರುಷನ ಒಗರು ಅರ್ಧನಾರೀಶ್ವರ ಕಾಯದಲ್ಲಿವೆ ನೀನೆಂಬ 'ನೀನು' - ನಾನೆಂಬ 'ನಾನು' ಏಕದಳದ ಅದ್ವೈತದಲ್ಲಿವೆ ಎಷ್ಟು ಹಗಲು - ರಾತ್ರಿಗಳು ಸರಿದವು ಕೊನೆಗೊಂದು ಚೌಕಟ್ಟು ನಿರ್ಣಯಿಸಲು ! ಅಂದುಕೊಂಡುದು ಹಾಡಲನುವಾಗಿ ಕುಂತರೆ - ಹರಿವ ನೀರು ಉರಿವ ಕೆಂಡವಾಗಿ ಕಡಲುಕ್ಕಿತು.
----------------------------------
ನೋಂದಣಿ ಐಡಿ : KPFS2-8888