Submission 5486

ನಿನ್ನರಸಿ ಬಂದಾಗ

ರಚನೆ : ಜಯಶ್ರೀ ಎಸ್

----------------------------------

ನಿನ್ನರಸಿ ಬಂದಾಗ ಹಾದಿಯಲ್ಲಿ ಹೂವು ಅಳುತ್ತಾ ಹೇಳಿತ್ತು ಗೆಳತಿ ನೀ ಮರಳಿ ಬಾರೆಯೆಂದು... ಆದರೂ ಮನವು ಹೇಳಿತ್ತು ನೀ ಮತ್ತೆ ಸಿಗುವೆ ಸಾಗು ಮುಂದೆ ಮುಂದೆ ಎಂದು ಮನದ ಮಾತ ಕೇಳಿ ಮುನ್ನಡೆದು ನಡೆದಾಗ ಕಂಡಿತ್ತು ನಿನ್ನ ಹೆಜ್ಜೆಯ ಜೊತೆ ಜೊತೆಗೆ ಇನ್ನೊಂದು ಹೆಜ್ಜೆಯ ಗುರುತು ಆಗ ಅನ್ನಿಸಿತು ಗೆಳತಿ ಹಾದಿಮಾತ ಕೇಳಿ ಮರಳಿ ನಡೆಯಬೇಕಿತ್ತು ಬಂದ ದಾರಿಯೆಡೆಗೆ

----------------------------------

ನೋಂದಣಿ ಐಡಿ : KPFS2-8876

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top