Submission 5432

ಹೇ.. ಮನಸ್ಸೇ

ರಚನೆ : ಅಬ್ದುಲ್ಲಗೌಸ್ ಮಲದಾರ್

----------------------------------

ಅವಳೊಂದು ಸುಂದರ ಕನಸು ನನ್ನ ಕನಸುಗಳಲ್ಲಿ ಬಂದು ನನಸಾಗದ ಮನಸ್ಸು ಬಿಟ್ಟು ಹೋದ ಕ್ಷಣಗಳು ಇನ್ನೂ ಇದೆ ಕಣ್ಣ ಮುಂದೆ ಆದರೆ ಈ ಕಣ್ಣುಗಳು ಕಾಯುತ್ತಿವೆ ನೀ ಬರುವ ದಾರಿಯನ್ನು ಬಿಡದೆ ಹಿಂದೆ ಮುಂದೆ ನೀ ಬಿಟ್ಟು ಹೋದ ಜಾಗ ಕಾಡುತ್ತಿದೆ ಕ್ಷಣ ಕ್ಷಣ ಆದರೆ ನಾ ಇಲ್ಲೇ ಕುಳಿತು ಕಾಯುವೆ ನೀ ಬರುವ ಹಾದಿಯ ಪ್ರತಿಕ್ಷಣ ನೀ ಬಾರದೇ ಇರುವುದನ್ನು ಅರಿತು ಕಣ್ಣು ಒದ್ದೆಯಾಯಿತು ನನ್ನನ್ನೇ ನಾ ಮರೆತು ನೀ ಬಂದರೆ ಬೆಳಕಾಗುವುದು ನನ್ನ ಈ ಜೀವನ ನೀ ಬಾರದೇ ಇದ್ದರೆ ನಾ ಎಂದಿಗೂ ಹಾರೈಸುವೆ ಸುಖವಾಗಿರಲಿ ಆ ನಿನ್ನ ಮುಂದಿನ ಸುಂದರ ಜೀವನ.

----------------------------------

ನೋಂದಣಿ ಐಡಿ : KPFS2-8838

0
Votes
120
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top