Submission 5428

ಅವ್ವ

ರಚನೆ : ಯಮನೂರಪ್ಪ ಎಸ್ ಅರಬರ

----------------------------------

ಒಂಬತ್ತು ತಿಂಗಳು ಗರ್ಭದಿ ಹೊತ್ತಂತಾಕಿ ನನ್ನವ್ವ ಹೆಸರಿಗೆ ಉಸಿರು ಕೊಟ್ಟಂತಾಕೆ ರಕ್ತವ ಬಸಿದು ಜನ್ಮವನು ನೀಡಿದಾಕಿ ಸಾವಿರ ದೇವರ ಸ್ವರೂಪ ಪಡೆದಾಕಿ. ನನ್ನಮ್ಮ ಕಷ್ಟವ ತೋರದೆ ನಲಿಸಿದಾಕಿ ಮುತ್ತಿನ ತುತ್ತನು ನೀಡಿದಿ ತಾಯಿಯಾಕಿ ಚಂದ ಮಾಮನ ತೋರಿಸಿ ತಿನಿಸಿದಾಕಿ ತನ್ನಯ ಮಕ್ಕಳಿಗೆ ಎಲ್ಲವ ಅರ್ಪಿಸಿದಾಕಿ. ಕರುಳ ಕತ್ತರಿಸಿ ಜೀವವ ನೀಡಿದವಳು ಸುಖದ ನಿದ್ರೆಗೆ ಜೋಗುಳ ಹಾಡಿದವಳು ಹೃದಯ ಬಡಿತದ ಪ್ರತಿಯ ರೂಪದವಳು ಕಣ್ಣಿಗೆ ಕಾಣುವ ದೇವರ ಸ್ವರೂಪದವಳು.

----------------------------------

ನೋಂದಣಿ ಐಡಿ : KPFS2-8836

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top