Submission 5412

ಭಾವನೆ

ರಚನೆ : ಚಂದ್ರಶೇಖರ ಎಸ್ ಭಂಗಿ

----------------------------------

ಹೃದಯ ಬಯಸಿದೆ ಸಂಜೆ ವೇಳೆಗೆ ಭಾರವಾಗಿದೆ ಭಾವನೆ ಸುಳಿವಗಾಳಿಯೂ ಮೆಲ್ಲ ಬೀಸಲು ಕಾಡುತ್ತಿರುವ ವೇದನೆ ಒಳಗಿನಿಂದ ಅಲೆಯು ಬರುತಿವೆ ದಡದ ತೆರೆಯ ಅಪ್ಪುತ ಯಾವ ಕೊಳೆ ಒಳಗೆ ನಿಲ್ಲದು ತೆಗೆದು ಹೊರಗೆ ಎಸೆಯುತ ಭಾನುಸಾಗರ ರಂಗು ತುಂಬಿದೆ ರವಿಯು ಆಚೆ ಸರಿಯುತ ಕ್ಷಣದ ನಾಚಿಕೆ ಗಳಿಗೆಯೊಳಗೆ ಮುಂದೆ ಕತ್ತಲು ತುಂಬುತ ನಡೆದ ಹೆಜ್ಜೆ ಗುರುತು ಉಳಿವುದೇ ಸಾಗರಲೆಯ ಬಡಿತಕೆ ತೊಳೆದು ಹೋಗಿವೆ ಹಳೆಯ ಕಲೆಯ ಮತ್ತೆ ನವವಸಂತಕೆ ಎತ್ತ ನೋಡಲು ಅತ್ತ ಹಸಿರಿದೆ ಸುತ್ತ ಚಿಗುರಿದೆ ಗಿಡ ಮರ ಕಾಯಿ ಮಾಗಲು ಹಣ್ಣಿನೊಳಗಡೆ ಸಿಹಿ ತುಂಬವ ಪರಿಸರ ಹೊಂದಿಕೊಳ್ಳುವ ಗುಣದ ಕೊರತೆ ನಮ್ಮಲಿಂದು ತುಂಬಿದೆ ಸಹನೆಯಿಂದ ಸಹಿಸಿಕೊಳ್ಳುವ ಭಾವ ನಮ್ಮಲ್ಲಿ ಬರುವುದೆ

----------------------------------

ನೋಂದಣಿ ಐಡಿ : KPFS2-8825

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top