ನನ್ನ ಸಮುದ್ರ ಅವನು
ರಚನೆ : ನಿತ್ಯಶ್ರೀ ಆರ್
----------------------------------
ಅವನ ನಿಶ್ಶಬ್ದದ ಆಳದಲ್ಲಿ ನಾನು ಮಾತ್ರ ಓದಬಲ್ಲ ರಹಸ್ಯಗಳಿರಬೇಕು... ಸಮುದ್ರದಂತೆ ಅವನ ಅಂತರಾಳದಲ್ಲಿ ನನಗೆ ಮಾತ್ರ ಮೀಸಲಿರುವ ಮುತ್ತುಗಳಿರಬೇಕು... ನಾನು ಮರಳಿನ ಮೇಲೆ ಬರೆದ ತಪ್ಪಾದ ಸಾಲುಗಳನ್ನು ಮತ್ತೆ ಮತ್ತೆ ಅಳಿಸಿ ಹೋಗುವ ಅಲೆಯಾಗಬೇಕು... ಪ್ರತಿ ಅಲೆಯೂ ನನಗೆ ಸಂದೇಶ ಹೊತ್ತು ತರಬೇಕು ಆ ಸಂದೇಶದ ಬರಹ ಅಳಿದರೂ, ಭಾವನೇ ಉಳಿಯುವ ಹಾಗಿರಬೇಕು... ಅವನೆನ್ನುವ ಸಮುದ್ರಕ್ಕೆ ನನ್ನೇ ತೀರವಾಗಿಸುವ ಮೌನ ಕನಸಿನೊಂದಿಗೆ ಜಗತ್ತು ಹಿಂದೆ ಎಂದೂ ಕೇಳದ ಮುಂದೆ ಇನ್ನೆಂದೂ ನೋಡದ ಒಲವ ಪಯಣಕ್ಕೆ ಮುನ್ನುಡಿ ಬರೆದಿರುವೆ...
----------------------------------
ನೋಂದಣಿ ಐಡಿ : KPFS2-8823