Submission 5340

ನೆಲದ ಮೌನ

ರಚನೆ : ಸಹನಾ ವಿನಾಯಕ

----------------------------------

ಸಹಿಸಿ ಸಾಕೆನಿಸಿದರೂ ಬಿಟ್ಟುಬಿಡುವ ಮನಸ್ಸು ಬರದೇಕೊ? ನಾನಿಲ್ಲಿ ಸಣ್ಣಗೆ ಕಂಪಿಸಿದರೂ ಸಾಕು ತಲ್ಲಣಿಸುವ ಜೀವಿಗಳಿಗೆ ನಿಂತಲ್ಲೆ ಗುಂಡಿ ಕೊರೆದುಕೊಳ್ಳುವ ಹುಮ್ಮಸ್ಸೇಕೊ? ಆಗಾಗ ನಾ ಕೋಪದಿ ಕಂಪಿಸಲು ಉಸಿರು ಚಲ್ಲಿದವರನು ಬೇಸರದಿ ಈ ಮಡಿಲೊಳಗೆ ಸೇರಿಸಿಕೊಳ್ಳಲಿಲ್ಲವೇ? ಎಷ್ಟಾದರೂ ಮಕ್ಕಳಲ್ಲವೇ ಎಂಬ ಮಮತೆ ಬಿಡುವುದೆ ತಾಯಿ ಹೃದಯವ? ನನ್ನ ಕಣ್ಣೀರು ಕಂಡು ಕ್ರೋಧದಿ ಸುನಾಮಿಯಾದ ಅಣ್ಣನನ್ನು ಈ ಮಕ್ಕಳಿಗಾಗಿಯೆ ತಡೆಯಲಿಲ್ಲವೇ? ಮರೆತು ಹೆಣ್ಣಿಗೆ ಖುಷಿಯಿಂದ 'ನನ್ನಂತಾಗು' ಎಂದು ಹರಸಿ ಬಿಟ್ಟೆನೇನೊ ಅದಕ್ಕಾಗಿಯೇ ಅವರಿಗೂ ಈ ಒಡಲ ಒದ್ದಾಟ ನನ್ನದೆ ಮೌನ ಹೊತ್ತು ಸಹಿಸಿದ್ದಕೇನೊ ಭೂಮಿ ತೂಕದ ತಾಳ್ಮೆ ಎಂಬ ಕೀರ್ತಿ ಮಾತನಾಡದೆ ಮೂಕಿಯಾಗುವ ಅಭ್ಯಾಸವೆಕಾಯಿತೋ! ನಾ ಮೌನ ಮುರಿದಂದೆ, ಅವಳು ಮಾತಾಡಬಹುದೇನೊ? ಎಲ್ಲವು ಸರಿ ಹೋಗಬಹುದೇನೊ!"

----------------------------------

ನೋಂದಣಿ ಐಡಿ : KPFS2-8781

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top