Submission 5304

ಬದುಕಿನ ಬೆಳಕು

ರಚನೆ : ಸಂತೋಷ್ ಮರಿಯಣ್ಣನವರ್

----------------------------------

ಬಿಟ್ಟಿರಲಾರೆ ಒಂದೂ ದಿನ ಮರೆಯಲಾರೆ ನೀ ಒಲಿದ ದಿನ ನಲುಮೆಯ ಗೆಳತಿಗೆ ಕುಣಿಯುವ ಮನ ಕಾಣದಿದ್ದರೆ ಒಂದು ಕ್ಷಣ ಹೃದಯ ಮಿಡಿಯಲಾರದು ಮರು ಕ್ಷಣ ಎಟುಕದ ತಾರೆಗೆ ಹೋಲಿಕೆ ಏತಕೆ ಬದುಕಿನ ಬೆಳಕು ನನ್ನಾಕೆ ತನ್ನ ಪ್ರೀತಿಗೆ ಅದರ ರೀತಿಗೆ ಸ್ಪಂದಿಸಿ ವಂದಿಸಿ ಬೆಳಗುತಿದೆ ಹೋಲಿಕೆ ಇಲ್ಲದ ನಗುಮುಖ, ಬಿಡಿಸಲಾಗದ ಅದ್ಬುತ ಸಾವಿರ ಕಷ್ಟಗಳು ಇದ್ದರು ಒಳಗೆ ನಗುನಗುತ ಇರುವಾಕೆ ಯಾವ ಕಷ್ಟಗಳು ‌ನನ್ನ ಬಳಿಗೆ ಬರದಂದೆ ನೋಡಿಕೊಂಡಾಕೆ ದೇವತೆಯಂತೆ, ಅನ್ನಪೂರ್ಣಿಯಂತೆ

----------------------------------

ನೋಂದಣಿ ಐಡಿ : KPFS2-8758

10
Votes
173
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top