Submission 5244

ಕನ್ನಡಕ್ಕೆ ಕನ್ನಡಿಯೇ?

ರಚನೆ : ಅಭಿಲಾಷ್ ವಡೆಗದ್ದೆ

----------------------------------

ಕನ್ನಡಕ್ಕೆ ಕನ್ನಡಿಯ ಯಾಕ್ ಹಿಡಿತೀ ತಮ್ಮ, ಕನ್ನಡೀನಾ ನಾಚುವಂತದಾಳೋ ನಮ್ಮವ್ವ. ಮೈಸೂರ ಸೀರೆಯ ಮೈಮ್ಯಾಗ ಧರಸಿ, ಕೋಲಾರ ಚಿನ್ನವ ಕೊರಳಾಗ ಕುಣಿಸಿ, ಕಾವೇರಿ ತುಂಗೆಯ ಜಟೆಯಾಗ ಇರಿಸಿ, ಬಂದಾಳೋ ನಮ್ಮವ್ವ ದ್ವಿವರ್ಣವ ಮೆರೆಸಿ. ಭಾಷೆಗಳ ಸಾಮ್ರಾಜ್ಯದ ರಾಣಿಯ ಮೆರಗು, ಅಷ್ಟ ಜ್ಞಾನಪೀಠಗಳ ಜ್ಯೋತಿಯ ಸೊಬಗು, ಅಲ್ಪ ಜ್ಞಾನಿಗಳ ಸೊಕ್ಕನ್ನ ಮುರಿದು, ಬಂದಾಳೋ ನಮ್ಮವ್ವ ಕನ್ನಡಿಗರ ನೆಲೆ ಕಂಡು. ಕನ್ನಡಿಗರ ಹೃದಯದ ಚಿರಂತ ನಿವಾಸಿನಿ, ಸಹಸ್ರ ವರ್ಷಗಳ ಸುಮೃದ್ಧಿಯ ಕಲಾ ವಾಣಿ, ನಮ್ಮ ನಿಮ್ಮೆಲ್ಲರ ಜೀವ ಜನನಿ, ಬಂದಾಳೋ ನಮ್ಮವ್ವ ಕನ್ನಡದ ಒಡತಿ.

----------------------------------

ನೋಂದಣಿ ಐಡಿ : KPFS2-8720

26
Votes
202
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top