Submission 5202

ಪ್ರಶ್ನಿಸಬಾರದೆ?

ರಚನೆ : ಮು.ನಾ. ರಮೇಶ

----------------------------------

ನನ್ನನ್ನು ದುಡಿಯಲು ಕಳುಹಿಸಿ ನೀನು ಕುಡಿಯಲು ಕುಳಿತರೆ ಪ್ರಶ್ನಿಸಬಾರದೆ ? ಮುಸುರೆ ತಿಕ್ಕಿ, ಬುಗುಡಿ ಕೊಳ್ಳುಲು ಕೂಡಿಟ್ಟ ಹಣವ ನೀನು ಚಟಕ್ಕೆ ಕದ್ದರೆ ಪ್ರಶ್ನಿಸಬಾರದೆ? ಉಳಿದವರ ಮಕ್ಕಳಂತೆ ನನ್ನ ಮಗು ಶಾಲೆಗೆ ಹೋಗಲು ಬಯಸಿದಾಗ ನೀನು ಬೇಕರಿ ಕೆಲಸಕ್ಕೆ ಹಚ್ಚಿದ್ದನ್ನು ಪ್ರಶ್ನಿಸಬಾರದೆ ? ದುಡಿದು,ದಣಿದು,ಕುಸಿದು,ನೆಲಕ್ಕೊರಗಿದಾಗಲೂ ನೀನು ನಡೆಸುವ ಅಮಲಿನ ಅತ್ಯಾಚಾರಗಳ ಪ್ರಶ್ನಿಸಬಾರದೆ ? ನಿಜ, ನನಗೆ ಸೋತು, ಸತ್ತು ಸಾಕಾಗಿದೆ! ಕಾಸಗಲ ತಾಳಿಗೆ ಕೊರಳೊಡ್ಡಿರುವ ಒಂದೇ ಕಾರಣಕ್ಕೆ ಒಮ್ಮೆಯೂ ಪ್ರಶ್ನಿಸಬಾರದೆ ? ಕಿತ್ತೆಸೆದರೇನಾದೀತೆಂದು ಯೋಚಿಸಬಾರದೆ ?

----------------------------------

ನೋಂದಣಿ ಐಡಿ : KPFS2-8686

0
Votes
124
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top