Submission 5188

ಆತ್ಮವೇ ಪರಮಾತ್ಮ

ರಚನೆ : ಧನ್ಯ ಮಾದೇವ

----------------------------------

ಅಲ್ಲಿ-ಇಲ್ಲಿ ನೋಡಬೇಡಿ, ನಿಮ್ಮೊಳಗೆ ಬಂದು ಬಿಡಿ, ನಿಮ್ಮಲ್ಲಿ ನೀವಿದ್ದಾಗ ನಿಂತ ಸ್ಥಳವು ನಿತ್ಯ ಸುಂದರದಂತೆ. ಅಲ್ಲಿ-ಇಲ್ಲಿ ಆಲಿಸದಿರಿ, ನಿಮ್ಮೊಳಗೆ ನೀವು ಸ್ವತಂತ್ರರಾಗಿರಿ, ಅಂತರಂಗದ ಗಲಬೆಯು ಗಾನದಂತೆ, ಭಾವವು ಭಕ್ತಿಗೀತೆಯಂತೆ. ಅಲ್ಲಿ-ಇಲ್ಲಿ ಅಲೆದಾಡದಿರಿ, ನಿಮ್ಮೊಳಗೆ ನೀವು ಇಳಿದುಬಿಡಿ, ಮೋಡಗಳು ಕಿನ್ನರಲೋಕದಂತೆ, ಮಳೆಯು ಪ್ರೀತಿಯ ಹನಿಯಂತೆ. ಅಲ್ಲಿ-ಇಲ್ಲಿ ಮೈಮೆರೆಯದಿರಿ, ನಿಮ್ಮೊಳಗೆ ನೀವು ಆರಾಧಿಸಿರಿ, ದೇಹವು ದೇಗುಲದಂತೆ, ಆತ್ಮವು ಪರಮಾತ್ಮದಂತೆ.

----------------------------------

ನೋಂದಣಿ ಐಡಿ : KPFS2-8674

2
Votes
132
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top