Submission 5180

ಗ ಕಾರ ಮಾಲಿಕ

ರಚನೆ : ಸೌಮ್ಯ.ಕೆ.ಟಿ.

----------------------------------

ಗಮನವ ತನ್ನೆಡೆಗೆ ಬರಸೆಳೆದು, ಗಾಂಧಾರ ಸ್ವರದಿ ನನ್ನನು ಕೂಳಲೂದಿ ಕರೆಯುವನು. ಗಿರಿಧರ ಎಂದು ಬಿರುದು ಹೊತ್ತಿಹನು, ಗೀತೆಯ ಲೋಕಕ್ಕೆ ನೀಡಿಹ ಸಾರಥಿ ಇವನು. ಗುಪ್ತ ರೂಪ ಧರಿಸಿ, ಧರೆಗೆ ಬಂದು ಹೋಗುವನು, ಗೂಢ ನಿಘೂಡಗಳ ಜಾಲವ ಬಿಡಿಸುವ ಚತುರನು. ಗೃಹಗ್ರಹಗಳೆಲ್ಲವೂ ಇವನು, “ಗ್ರೂ” ಅಕ್ಷರದಲ್ಲಿಯೂ ನೆಲೆಯಾಗಿ ಕಾಯುತಿಹನು. ಗೆಳೆತನಕ್ಕೆ ಮಾದರಿ ಇವನು — ಗೇಣು ದೂರದಲ್ಲಿ ನೆರೆದರೆ ಸಾಕು, ಕೈ ಹಿಡಿದು ನಡೆಸುವ ಪರಮ ಪುರುಷನು. ಗೈಯ್ಯುವ ಸನ್ಮಾರ್ಗದಿ ಧರ್ಮಸ್ಥಾಪನೆಗೆ, ಗೊಂದಲ ಬೇಡ ಮನದಿ; ಗೋವಿಂದನ ನಾಮಸ್ಮರಣೆ ಒಂದಿರಲು. ಗೌರೀ ಶಿಖರವ ನಿನ್ನಲ್ಲಿ ತೋರಿಸಿ ಬಿಡುವ, ಗಂಭೀರ ವಿಶ್ವರೂಪದಿ ಗಂಗಾಧರನ ಪ್ರಿಯ ಸಖನು; ಭವಬಂಧನವ ಬಿಡಿಸುವನಿವನು ವಿಸರ್ಗದಿಂ — ಗೋಪಾಲ, ಗೋಕುಲ, ಗೋವಿಂದರೂಪನು!

----------------------------------

ನೋಂದಣಿ ಐಡಿ : KPFS2-8670

144
Votes
726
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top