Submission 5142

ಬದುಕಿನ ವಿಭಿನ್ನ ಮುಖಗಳು

ರಚನೆ : ಮೈತ್ರಾವತಿ ವಿ.ರಾಣಿ

----------------------------------

ದೀಪದ ನೆರಳಿನಲಿ ಜೀವನದ ಬೆಳಕು ಹುಡುಕುವ ಜೀವಗಳದೆಷ್ಟೋ... ಬೆಳಕೇ ಮೂಡದ ಬಾಳಿನಲಿ ಕನಸಿನರಮನೆ ಕಟ್ಟುವ ನಯನಗಳದೆಷ್ಟೋ... ಕನಸುಗಳ ಬೆನ್ನೇರುವ ವಯಸಿನಲಿ ಬದುಕಿನ ಮಣಭಾರ ಹೊರುವ ಮುಗ್ಧ ಮನಸ್ಸುಗಳದೆಷ್ಟೋ... ಬಡತನದ ಬೇಗೆಯಲಿ ಕಮರಿದ ಕನಸುಗಳೊಡನೆ ಬದುಕಿನ ದಾರಿ ಸವೆಸುವ ಹೃದಯಗಳದೆಷ್ಟೋ... ವಿಕಲತೆಯ ಬೆಂಕಿಯಲರಳಿ ಸಾಧನೆಗೂ ಸವಾಲೆಸೆಯುವ ಮನಗಳದೆಷ್ಟೋ... ಯಾವುದೋ ಸುಳಿಗೆ ಸಿಲುಕಿ ಜೀವದ ಹಂಗು ತೊರೆದು ಜೀವಿಸುವ ಜೀವಗಳಿಗೆ ಸದಾ ಮಿಡಿಯುವ ಅಂತಃಕರಣ ನಮ್ಮದಾಗಿರಲಿ

----------------------------------

ನೋಂದಣಿ ಐಡಿ : KPFS2-8635

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top