ಅವಳು
ರಚನೆ : ಪವಿತ್ರ. ಎನ್. ದೇವಾಡಿಗ
----------------------------------
ಸ್ವಾಣಿ ಮಳೆ ಬೀಳುವಂಗೆ ಅಬ್ಬಿ ಮಕ್ಳ ಸಂಬಂಧವದು.. ಆಕಾಶಕ್ಕ ಏಣಿ ಹಾಕಿಲ್ಲ ಅಂದ್ರು ಮಕ್ಳ ಬದ್ಕ್ ಅಂದ್ರೆ ಕನ್ಸ ಕಂಡಷ್ಟು ಸಾಕಾತಿಲ್ಲ ಅವರ್ಗೆ.. ಪದಗಳೇ ಇಲ್ಲದ ಪ್ರೀತಿ ಅದ ಮಮತೆಯೇ ಅವಳ ಹಸಿರ ಗಣಿ.. ಅಲೆಗಳು ಅಪ್ಪುವ ಕಡಲಲ್ಲಿ ಮಗುವಿಗೆ ತಾಯಿಯೇ ಕಡಲಲ್ದೆ.. ಕರುಳ ಬಳ್ಳಿಯ ಕುಡಿಯದು ವರ್ಣಿಸಲಾಗದ ಬಂಧವದು..
----------------------------------
ನೋಂದಣಿ ಐಡಿ : KPFS2-8585