Submission 5056

ಜೀವನದ ನಿಯಮ

ರಚನೆ : ಅರುಣ್ ಕುಮಾರ್ ಬಿ ಎಸ್

----------------------------------

ಓ ಮನುಜ ನೀತಿಳಿಯೊ ಈ ಜೀವನದ ನಿಯಮ.. ಓ ಮನುಜ ನೀಕಲಿಯೊ ಬದುಕಿನ ಪಾಠವ.. ಈ ಹುಟ್ಟು ಉಚಿತ..ಆ ಸಾವು ಖಚಿತ.. ಎಲ್ಲಾರು ಸಾಯೋದೆ ಇಲ್ಲಿ.. ಸಾಯುವ ಮೊದಲೆ ಏನಾದರು ಸಾಧಿಸು ನೀನಿಲ್ಲಿ.. ಆ ಚಂದ್ರನು ಸತ್ಯ..ಈ ಭೂಮಿಯು ನಿತ್ಯ.. ಬೆಳಕು ನೀಡೋನೆ ಜಗಕೆ ಸೂರ್ಯ.. ಅನುದಿನವು ಪೂಜಿಸು ಅವನ ಬಿಡದೆ ನೀನಿಲ್ಲಿ.. ದಿನವೂ ನಿನ್ನನ್ನು ಹಿಂಬಾಲಿಸಿ ಜೊತೆ ಬರುವುದು ನಿನ್ನ ನೆರಳು ಮಾತ್ರ ಕಣೊ.. ಆನಿನ್ನ ನೆರಳುಕೂಡ ಮರೆಯಾಗುವುದು ಬೆಳಕೀಗೆ ನೀಎಂದು ಕಾಣದಾಗ.. ದಿನವೂ ನಿನ್ನನ್ನು ಸಂಭಾಳಿಸಿ ಬೆಳೆಸುವುದು ನಿನ್ನ ತಾಯಿ ಮಾತ್ರಕಣೊ.. ಆನಿನ್ನ ತಾಯಿಗೆ ಕೂಡ ನೋವಾಗುವುದು ಅವಳಿಗೆ ನೀಪ್ರೀತಿ ಕೊಡದಾಗ.. ತಾಯಿಯು ಸತ್ಯ..ತಾಯಿ ಪ್ರೀತಿಯು ನಿತ್ಯ.. ಜನುಮ ಕೊಟ್ಟ ತಾಯೀನೆ ದೇವರು.. ಪ್ರತಿನಿತ್ಯವು ಪೂಜಿಸು ಅವಳ ಬಿಡದೆ ಬಾಳಲ್ಲಿ..

----------------------------------

ನೋಂದಣಿ ಐಡಿ : KPFS2-8568

0
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top