ಒಡೆದ ಮನಸು
ರಚನೆ : ಆರ್ ಕೇಶವ ಕಾರಂತ
----------------------------------
ಒಡೆದ ಮನವದು ಕಡಲ ತೀರದ ಮರಳ ಅರಮನೆಯು... ಚಿಕ್ಕ ಅಲೆಯೊಂದು ಸಾಕು ಆ ಕನಸಿನರಮನೆಯ ನುಚ್ಚು ನೂರಾಗಿಸಲು... ಚದುರಿದ ಕನಸ ಒಗ್ಗೂಡಿಸಲು ಹೊರಟೆ, ಪ್ರಯತ್ನವದು ವಿಫಲ, ಅಲೆಯು ಮತ್ತೆ ಮೂಡಿಬರಲು... ವಿನಾಶಕಾರಿ ಅಲೆಯ ಎದುರು, ನಿಷ್ಪ್ರಯೋಜಕವದು ನನ್ನೆಲ್ಲಾ ಬಲವು ... ಹೊರಬರಲು ದಾರಿಯೊಂದೇ, ಗಟ್ಟಿಯಾಗಬೇಕು ನನ್ನ ಮನಸು... ಮರಳಿನರಮನೆ ಒಡೆದರೇನಂತೆ, ಶಿಲೆಯ ದೇಗುಲವ ನಿರ್ಮಿಸಬೇಕು ಮರಳಲಿಂಗ ಒಡೆದ ಮಾತ್ರಕೆ, ಶಿವನ ಆತ್ಮಲಿಂಗವ ಪ್ರತಿಷ್ಠಿಸಿದಂತೆ ... ಮನದ ಅರಮನೆಯ ಗುಡಿಯಾಗಿಸಿ, ಆ ಪರಮಾತ್ಮನಿಗದನು ಅರ್ಪಿಸಬೇಕಿಂದು
----------------------------------
ನೋಂದಣಿ ಐಡಿ : KPFS2-8561