ನೆನೆಯುವವರಾರು?
ರಚನೆ : ಜ್ಞಾನೇಶ ಜಿ
----------------------------------
ನೆನೆಯುವವರಾರು ಮರೆಯಾದವರನು ಹೊಸ ಚಿಗುರು ಕವಲೊಡೆಯುತ್ತಿರೆ, ಕೆಳಗೆ ಬಿದ್ದ ಹಣ್ಣೆಲೆಯ ಕಾಣುವವರ್ಯಾರು? ಹತ್ತು ದಿನ ಶೋಕ, ಹನ್ನೊಂದನೆಯ ದಿನ ಔತಣ, ವರುಷಕ್ಕೊಮ್ಮೆ ಸಂತೋಷಕೂಟ ಮರೆಯಾದವರ ಹಿರಿಯರಂತೂ, ಹೇಳ ಹೆಸರಿಲ್ಲದೇ ಹೊರಟರು. ಗೋಪುರದಲಿ ಹೊಳೆಯುವ ಕಳಸಕ್ಕೆ ಬುನಾದಿಯಲಿ ಹುದುಗಿದ ಕಲ್ಲುಗಳೆಷ್ಟೋ? ಜೀವನವು ಉರುಳುವ ಚಕ್ರವೆಂಬುದು ನಿಜ, ಚಕ್ರ ಸವೆದಷ್ಟೂ ಮೇಲ್ತಿರುಳು ರಸ್ತೆಗೇ ಅಂಟೀತು, ಪಂಚಭೂತಗಳಲ್ಲಿ ಒಂದಾಗಿ, ಐದಾದವರೆ ವಿಶ್ವ ಜೀವನದ ಮುಕ್ತಿಗೆ ಶಕ್ತಿ!
----------------------------------
ನೋಂದಣಿ ಐಡಿ : KPFS2-8544