ಯಾತ್ರೆ
ರಚನೆ : ಬಾಲಸುಬ್ರಮಣ್ಯಂ ಎಸ್
----------------------------------
ಕಣ್ಣೆದುರೆ ಸಾಗುತಿದೆ ಜೀವ(ನ)ದ ಯಾತ್ರೆ ಇದು ಎಲ್ಲಿ ತಂಗುವುದೋ ? ಒಟ್ಟಿನಲ್ಲಿ ಸಾಗುತಿದೆ ಮುಂದೆ - ಮುಂದಕ್ಕೆ ಎಲ್ಲಿ ತಂಗುವುದೋ ಕೊನೆಗೆ. ಎತ್ತ ನೋಡಿದರತ್ತ ಬೇಸರದ ಬದುಕು ಮುಂದಿರುವುದು ಕತ್ತಲೆಯ - ನೆತ್ತರದ ಬದುಕು ಆತ್ಮವಿಶ್ವಾಸಕ್ಕೆ ಘಾತಕ ನೀಡುವ ನಶ್ವರ ಲೋಕದಲ್ಲೆಲ್ಲವೂ ಅಪಸ್ವರ. ಹುಟ್ಟು ಸಾವಿನ ಕೊನೆಯಿಲ್ಲದಾಟದಲಿ ಗೆಲ್ಲುವವರಾರು? ಗೆಲುವವನಿಗಿಂತ - ಸೋಲುವವನೇ ವೀರ ಮೃತ್ಯು ದೇವಿಯ ಹಮ್ಮಿರ ಜೀವ(ನ)ದ ಯಾತ್ರೆಯಲಿ ಸಗ್ಗದೆಡೆಗೋ - ನರಕದೆಡೆಗೋ ಸಾಗುವ ನರ - (ದೇ)ವರ - ಶೂರ
----------------------------------
ನೋಂದಣಿ ಐಡಿ : KPFS2-8529