ಕಾರಣವೇ ನನ್ನ ಧರ್ಮ?
ರಚನೆ : ಜತೀನ್. ಬಿ
----------------------------------
ಧರ್ಮ ಧರ್ಮ ಯಾವ ಧರ್ಮ ,ಮನುಜ ಮಾಡು ನಿನ್ನ ಕರ್ಮ ಕರ್ಮ ಕರ್ಮ ನಿನ್ನ ಕರ್ಮ ,ಮಾಡಿ ಇಡುವೇ ಹೆಸರು ಧರ್ಮ. ನೋಡಲೋದೆ ಸುಂದರ ಕಾಶ್ಮೀರ , ಜೊತೆಗೆ ಇತ್ತು ನನ್ನ ಪರಿವಾರ , ದೇಶ ತೋರಿಸಲು ನಿನಮೇಲೆ ತಾತ್ಸಾರ , ನೋಡು, ನಡೆದೇ ಹೋಯಿತು ಘಟನೆ ಇದು ಭೀಕರ. ಕನಸ ಕಂಡೆ ಜೊತೆಗೆ ಇರಲು , ನಾ ಏಳು ಜನ್ಮ ಏಳೇ ದಿನದಿ ಮುಗಿದೆ ಹೋಯಿತು , ಕಾರಣವೇ ನನ್ನ ಧರ್ಮ. ಮಡದಿ ಮಗುವನೇಕೆ ಬಿಟ್ಟೆ, ಬೇಡ ವೆಂದಿತೆ ಬಂದೂಕು, ಮನುಜ ನಿನ್ನ ಸ್ವಾರ್ಥಕ್ಕೆ, ರಕ್ತ ಚಿತ್ತ ಈ ಬದುಕು. ಉಸಿರಾಡುವ ಗಾಳಿ ಒಂದೇ, ಹರಿದಾಡುವ ನೀರೂ ಒಂದೇ ನಡುವೆ ನೀನು ಗೆರೆಯನೆಳೆದು, ಕೊಲ್ಲಲೆನ್ನ ಕಾರಣವೆಂದೆ. ಏನೂ? ಧರ್ಮವೇ ಮನುಜನ, ಮನುಜ ಸುಡಲು ಕಾರಣ ಎರಡು ದೇಹ ಸುಟ್ಟು ನೋಡು ಬೂದಿ ಒಂದೇ ವರ್ಣ.
----------------------------------
ನೋಂದಣಿ ಐಡಿ : KPFS2-8490