Submission 4946

ನಮ್ಮ ಬಂಧು

ರಚನೆ : ಹಣಮಂತ ಭಜಂತ್ರಿ

----------------------------------

ಉಳುಮೆ ಮಾಡುವವನು ನೀನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಾಗ ಬಹು ಬಳಲುತ್ತಿರುವವನು ನೀನು... ತಾನು ಉತ್ತಿ-ಬಿತ್ತಿದ ಬೆಳೆಗೆ ಬೆಲೆಯನ್ನು ನಿಗದಿ ಮಾಡದಾತನು ನೀನು ನೀ ನಮ್ಮ ಬೆನ್ನೆಲುಬು ಸುಖಭೋಗದ ಜೀವನಕ್ಕಾಗಿ ನೀರನ್ನು ಪೋಲು ಮಾಡುವವರ ಮಧ್ಯೆ! ಮಳೆರಾಯನ ಬರುವಿಕೆಗಾಗಿ ಮುಗಿಲತ್ತ ತಲೆಯೆತ್ತಿ ಹಂಬಲಿಸುತ್ತಿರುವವನು ನೀನು... ನೀ ನಮ್ಮ ಬೆನ್ನೆಲುಬು ನೀ ನಮ್ಮ ಬಂಧು. ಜನ್ಮ ಕೊಟ್ಟವಳು ನಿನಗೆ ಮೊದಲ ತಾಯಿಯಾದರೆ... ನೀ ಉಳುವ ಭೂಮಿ ಎರಡನೆಯ ತಾಯಿಯಾದಳು ಇರ್ವರಿಗೂ ನೀ ಮುದ್ದಿನ ಮಗನಾಗಿರುವೇ ನೀ ನಮ್ಮ ಬೆನ್ನೆಲುಬು ನೀ ನಮ್ಮ ಬಂಧು

----------------------------------

ನೋಂದಣಿ ಐಡಿ : KPFS2-8484

1
Votes
120
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top