ಕಡಲ್ಗನಸು
ರಚನೆ : ನಿತಿನ್ ಆರ್ ಎನ್
----------------------------------
ಹೇ ಮನುಜ ಕಡಲಿಗೊಂದು ಕನಸಿದೆ, ತನ್ನ ಒಡಲು ಮಡಿಯಾಗುವ ಆಸೆಯಿದೆ. ಹೇ ಮನುಜ ನೋಡಲಾಗದು ಜೀವರಾಶಿಗಳ ಕಷ್ಟ, ನಿನ್ನ ಕಾಯಕದಲ್ಲಿ ಅಡಗರಲಿ ಅವುಗಳ ಇಷ್ಟ. ಹೇ ಮನುಜ ನಿನ್ನ ಪಾಪ ತೊಳೆವ ಕಡಲು, ತಿಳಿ ಮಾಡು ಇದರ ಮಡಿಲು. ಹೇ ಮನುಜ ತೋರಿಸು ನಿನ್ನ ಯುಕ್ತಿ, ಇದಾಗಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತಿ. ಹೇ ಮನುಜ ಬರೆ ಇದಕ್ಕೆಲ್ಲ ಮುನ್ನುಡಿ, ಇದಾಗಬೇಕು ಸೂರ್ಯಚಂದ್ರರಿಗೆ ಕನ್ನಡಿ.
----------------------------------
ನೋಂದಣಿ ಐಡಿ : KPFS2-8408