ಪಾಠ
ರಚನೆ : ರಕ್ಷಿತಾ.ಕೆ
----------------------------------
ಸಂಚಾರಿಸುವ ಈ ಪಯಣದಿ ಸಿಗಬಹುದು ಒಂದೊಳ್ಳೆ ಹಾದಿ. ಚುಚ್ಚುವ ಕಲ್ಲಾಗಲಿ ದಟ್ಟ ಕಾಡಾಗಲಿ ಗೆಲುವು ಅಡಗಿದೆ ನಿನ್ನ ಆ ಸಾಮರ್ಥ್ಯದಲ್ಲಿ. ಸೋತವನ ಅಂತ್ಯ ಇದಲ್ಲ ಅವನ ಗೆಲ್ಲಿಸುವ ಶಕ್ತಿ ಬೇರಾರದಲ್ಲ ಮನಸ್ಸೆ೦ಬ ಪುಸ್ತಕವ ಅರಿತವರಿಲ್ಲ ಅರಿತು ಓದಿದವ ಗೆದ್ದನಲ್ಲ. ಕನಸು ಅಡಗಿದೆ ಮೋಡದ ಸೆರೆಯಲ್ಲಿ ಮೋಡವ ಮಳೆಯಾಗಿಸು ನಿನ್ನ ನನಸಿಗಾಗಿ ನಿಟ್ಟುಸಿರ ಬಿಡು ಮನಸ್ಸ ಶಾಂತಿಗಾಗಿ ತಾಳ್ಮೆಯಿಂದ ಸ್ವೀಕರಿಸು ನಿನ್ನ ಒಳಿತಿಗಾಗಿ.
----------------------------------
ನೋಂದಣಿ ಐಡಿ : KPFS2-8406