ಮನಸ್ಸೇ ಹಾಗೆ
ರಚನೆ : ಪವನ್. ಎಸ್
----------------------------------
ಮನಸ್ಸೆ ಹಾಗೆ, ಅದು ನಿಲುವಿಲ್ಲದ ಜಾಗದೆಡೆಗೆ ಬಂದು ನಿಲ್ಲಿಸಿಬಿಡುತ್ತದೆ ಮನಸ್ಸೊಂದು ಪ್ರೀತಿಯೋ, ಭೀತಿಯೋ ನಾನರಿಯೆ ಮನುಷ್ಯನ ಮನಸ್ಸು ಮನವರಿಯದೆ, ಮನಸ್ಸೆ ಮನುಷ್ಯನಾಗಿದೆ ಪರ ಮನಸ್ಸಿನ ಮನಸ್ಸಿಗಾಗಿ ನಮ್ಮ ಮನಸ್ಸು ಮನದ ಮನೆಯನ್ನೇ ಕೆಡಗಿಬಿಡುತ್ತದೆ ಮನವರಿತ ಮನಸ್ಸಿಗೆ ಮನಸ್ಸೇ ಸಾಕ್ಷಿ.. ಮನಸ್ಸನ್ನ ಮನಸ್ಪೂರ್ತಿಯಾಗಿ ಮನಸ್ಸು ಮಾಡುವವರೆಷ್ಟು ಮನಸ್ಸಿನ ಭರಾಟೆಯಲ್ಲಿ ಮನುಜತ್ವ ಮರೆಯಬೇಕೆ ? ನಿರ್ಧಿಷ್ಟ ನಿರ್ಧಾರಗಳನ್ನು ನಿರ್ಧರಿಸುವುದು ಮನಸ್ಸೇ ಹೊರೆತು.. ಮನಸ್ಸು ಮಾಡಿದರೆ ಮಾಡಬಲ್ಲೆ ಎಂಬುದು ಮನಸ್ಸಾಗಲಾರದು ಮನಸ್ಸು ಮಾಡಿದ ಮನಸ್ಸಿಗೇನಾದರು ಮನಸ್ಸಾದರೆ ಆ ಮನಸ್ಸಾದ ಮನಸ್ಸೇ ಇರಲಾರದು ಹೌದು ಮನಸ್ಸಿನ ಭರಾಟೆಯೇ ಹಾಗೆ ಏಕೆಂದರೆ ಅದು ಮನಸ್ಸು.
----------------------------------
ನೋಂದಣಿ ಐಡಿ : KPFS2-8395