Submission 4800

ನೆಮ್ಮದಿ ನಿನ್ನೊಳಗೆ

ರಚನೆ : ಮಂಜುನಾಥ್ ಕೆ ರಂಜೋಲ್

----------------------------------

ಬದುಕಿನ ಬವಣೆಗೆ ನೆಮ್ಮದಿಯ ತಾಣವೆಲ್ಲಿ? ನಿನ್ನೊಳಗೆ ನೀ ನಾಗು, ನಮಗೆಲ್ಲ ನಗುವಾಗು. ನಿನ್ನ ಮನದ ಕದವ ತೆರೆದು, ನೆಮ್ಮದಿ ನಿನ್ನೊಳಗೆ ನೀ ಕಾಣು. ಕಲ್ಪನೆಯ ಲೋಕವಿದು, ಪಾತ್ರವೇ ನೆಪವಿಲ್ಲಿ, ನೀ ಪಾತ್ರನಾಗು, ಪವಿತ್ರನಾಗು. ಎಲ್ಲೆ ಹೋಗು, ನಿನ್ನ ತಾಣ ನೀ ಸುಗುಣಗೊಳಿಸು, ನೆಮ್ಮದಿ ನಿನ್ನೊಳಗೆ ನೀ ಕಾಣು. ಛಾಯೆ ಚಲನವಾಗಿದೆ, ಮನಸು ವ್ಯಂಗ್ಯವಾಗಿದೆ, ನೋಟವೇ ಮಾಟವಾಗಿದೆ. ಜನಜಾತ್ರೆಯಲ್ಲಿ ನಿರ್ಜನರಂತೆ ನೀ ಬಾಳ್ವೆಮಾಡು, ನೆಮ್ಮದಿ ನಿನ್ನೊಳಗೆ ನೀ ಕಾಣು. ಹರಿಯದವರನ್ನು ಉರಿಯಬೇಡ, ಕಾವಲು ದಾರಿ ಇದು, ಕಾಮನ ದೂರದಿರು. ನೆಮ್ಮದಿ ನಿನ್ನೊಳಗೆ ನೀ ಕಾಣು.

----------------------------------

ನೋಂದಣಿ ಐಡಿ : KPFS2-8380

2
Votes
117
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top