ಅವಳ ಆ ಮೌನ
ರಚನೆ : ನಾಗೇಶ ತಿಮ್ಮಣ್ಣ
----------------------------------
ಅವಳು— ಅವನಿಜೆಯ ಅನುಜೆಯಂತೆ ನನಗಾಗಿ ಕಾದಿಹಳು ಎದುರಾದರೆ ಲಜ್ಜೆಯೆ ನಾಚುವಂತೆ ನಾಚಿಹಳು ಕಿರುನಗೆಯದು ಒಲವಿನ ಮೋಡಗಳ ಪೋಣಿಸಿ ಹೊಸ ಮುಂಗಾರಿನ ಮುನ್ಸೂಚನೆಯ ನೀಡುತಿಹುದು ಮನಸಿನ ಹರ್ಷೋದ್ಗಾರದ ಗುಡಿಗಿನ ನಾದಕೆ ಗುಂಡಿಗೆಯದು ಸೋಗೆಯ ಬಿಚ್ಚಿ ಕುಣಿಯುತಿಹುದು ಮೈಯ ಬೆವರಿನ ಹನಿಯೊಂದು ಹೊಸಮಳೆಗೆ ತಂಪಾದ ಇಳೆಯ ಕಂಪಿನಂತೆ ಎಳೆ ಎಳೆಯಾಗಿ ಆವರಿಸಿತಿಹುದು ಈ ನಡುವೆ ಅವಳ ಆ ಮೌನವು ಸಾವಿರ ಸಾಲುಗಳ ತಾಳ್ಮೆಯ ಕವಿತೆಯೊಂದನು ಕಾಲುಗಳಲಿ ಗೀಚುತಿಹುದು
----------------------------------
ನೋಂದಣಿ ಐಡಿ : KPFS2-8378