ಪಿಂಡ
ರಚನೆ : ಪ್ರಭು ನಿಲಾರಿ
----------------------------------
ಸುಟ್ಟು ಹೋದ ದೇಹಕ್ಕೆ ಮಾಡಿ ಇಟ್ಟ ಪಿಂಡವು ಕಾಗೆ ಮುಟ್ಟುವ ಮುನ್ನವೇ ಶ್ವಾನದ ಹೊಟ್ಟೆ ಸೇರಿತು. ಆತ್ಮಕ್ಕೆ ಆಶೆಯು ಹೆಚ್ಚದಂತೆ ಅಯ್ಯರು ಮಾಡಿದ ಶಾಂತಿಯು ಅಗ್ನಿ ಹೋಮಕ್ಕೆ ತಂದ ತುಪ್ಪದಂತೆ ಆವಿಯು ಸಿಕ್ಕು ಆಹುತಿಯಾಯಿತು ಸತ್ತಾಗ ಸ್ಮಶಾನಕ್ಕೆ ಬಾರದ ಊರಿನ ದೊಡ್ಡ ಉದರಗಳು ತಿಥಿಗೆ ಮಾಡಿದ ಬಾಡೂಟಕ್ಕೆ ಸಮಯಕ್ಕೆ ಮುಂಚೆ ಬಂದಿದ್ದವು
----------------------------------
ನೋಂದಣಿ ಐಡಿ : KPFS2-8355