Submission 4751

ನನ್ನಾಕೆ ವೀರ ವನಿತೆ

ರಚನೆ : ರಂಜನ್ ವಿ ಆರ್

----------------------------------

ಬರೆಯುವೆನು ಮೊದಲ ಬಾರಿಗೆ ನಾನೂ ಒಂದು ಕವಿತೆ ನನ್ನ ಈ ಕವನಕ್ಕೆ ಸ್ಪೂರ್ತಿದಾಯಕ ನನ್ನಾಕೆ ವೀರ ವನಿತೆ ನೋವು ನಲಿವು ಸುಖ ದುಃಖ ದಂಪತಿ ಬದುಕಿನ ಸಮಚಿತ್ತ, ನನ್ನಾಕೆಯ ಸಂದೇಶಕ್ಕೆ ಹೂಂ ಎಂದು ತಲೆ ಬಾಗುವ ಅರಿವಿತ್ತ, ರಂಭೆ ಊರ್ವಶಿಗಿಲ್ಲ ಅವಳ ಸೌಂದರ್ಯದ ಹೋಲಿಕೆ ಅವಳು ದನಿಯೆತ್ತಿದರೆ ನನ್ನದು ಕೇವಲ ಮೂಕ ವಿಸ್ಮಿತ ಅಲಿಕೆ ನಯನ ಮನೋಹರ ಅವಳ ಬಹು ಸುಂದರ ಅಕ್ಷಿ ಮೈಯೆಲ್ಲ ರೋಮಾಂಚನ ಅವಳೊಮ್ಮೆ ಸೀನಿದರೆ ಆಕ್ಷಿ ಅವಳ ಆದರ್ಶಗಳ ಪಾಲಿಸಿದರೆ ನನ್ನ ಬಾಳಿಗೊಂದು ನೆಲೆ ನನ್ನ ಆದರ್ಶಗಳ ಪಾಲಿಸಲು ಕೇಳಿದರೆ ಅವಳ ಬಾಯಿಂದ ನನ್ನ ಕೊಲೆ ನನ್ನ ಪ್ರತಿ ಯಶಸ್ಸಿನ ಹಿಂದೆ ಅವಳ ಮೌನದ ಆಶೀರ್ವಾದ ಅವಳು ನಕ್ಕರೆ ನನ್ನೆದೆಯಲಿ ಪ್ರೀತಿಯ ಸುಖದ ಅಮೃತ ಪಾಕದ ಸವಿದ ಸ್ವಾದ ಇಷ್ಟೆಲ್ಲಾ ಇದ್ದರೂ ಅವಳಿಗೆ ನನ್ನ ಕಂಡರೆ ಬಲು ಪ್ರೀತಿ ಎಲ್ಲಾ ಜೋಡಿಗಳ ಸಂಪ್ರೀತಿ ಇರುವುದು ಇದೇ ರೀತಿ

----------------------------------

ನೋಂದಣಿ ಐಡಿ : KPFS2-8345

44
Votes
335
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top