Submission 4743

ಹೆಣ್ಣಲ್ಲವೇ ಆಕೆ!

ರಚನೆ : ರಾಮಮೂರ್ತಿ ಟೀ ಕೆ

----------------------------------

ಹೆತ್ತವರಿಗೆ ಹೊರೆಯಾಗಿ ಹುಟ್ಟಿದಾಕೆ ಜಗಕೇ ಜನುಮವ ನೀಡಿದಾಕೆ ಮನೆಯಲ್ಲಿ ಮಡದಿಯಾಗಿ ಮಡಿದಾಕೆ ಹೊಲದಲ್ಲಿ ದನದಂತೆ ದುಡಿದಾಕೆ ಕುಡುಕ ಗಂಡನಿಗೂ ಕೊರಳೊಡ್ಡಿದವಳಾಕೆ ಕ್ರೂರಿ ಮಕ್ಕಳಿಗೂ ಕರುಣೆ ತೋರಿದಾಕೆ ಮಕ್ಕಳಿಗೆ ಮುಪ್ಪಿನಲ್ಲಿ ಮಗುವಾದವಳಾಕೆ ತಾಳಿ ಕಟ್ಟಿದವನಿಗೆ ತಾಯಿಯಾದವಳಾಕೆ ಪಾಂಡವರಿಗೆ ಪಟಿಸಿದವಳಾಕೆ ಕೌರವರಿಗಾಗಿ ತಪಸ್ಸು ಮಾಡಿದವಳಾಕೆ ಕಟುಕನಿಗೆ ಕೂಳು ಕೊಟ್ಟವಳಾಕೆ ಕಾಮುಕನಿಗೂ ದಾಹ ತೀರಿಸಿದವಳಾಕೆ ಕಳಂಕವನ್ನು ಸೆರಗಲ್ಲಿ ಕಟ್ಟಿಕೊಂಡು ಕರುಣೆಯ ಕೂಳುತಿನಿಸಿದಾಕೆ ಹೆಣ್ಣಲ್ಲವೇ ಆಕೆ ಜಗಕೆ ಜೋಗುಳವ ಹಾಡುವಾಕೆ!

----------------------------------

ನೋಂದಣಿ ಐಡಿ : KPFS2-8332

0
Votes
131
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top