ಸುದ್ದಿ ಮಾಡಲಾಗುತ್ತಿದೆ
ರಚನೆ : ಸಂಜೀವ್ ಜಗ್ಲಿ
----------------------------------
ಇಡೀ ಊರೇ ಮುಳುಗಿದಾಗ ಊರು ನೋಡಲು ತೆಪ್ಪದಲ್ಲಿ ಬಂದ ಪ್ರತಿನಿಧಿಯ ಸುದ್ದಿಯಾಗುತ್ತಿದೆ. ಮಹಿಳೆಯೊಬ್ಬಳ ಅತ್ಯಾಚಾರವಾಗಿದೆ ಆಕೆ ರಾತ್ರಿ ಎಲ್ಲಿಗೆ ಹೋಗಿದ್ದಳೆಂಬ ವಿಶೇಷ ಚರ್ಚೆ. ಹಸಿವಿನಿಂದ ಜನ ಸಾಯುತ್ತಿರುವಾಗ ನಳಪಾಕದ ನಾಲ್ಕಾರು ಕಾರ್ಯಕ್ರಮ. ನೀರಿಲ್ಲದೆ ಜನ ಪರದಾಡುತ್ತಿರುವಾಗ ದೊಡ್ಡವರ ಗಂಗಾ ಸ್ನಾನದ ನೇರ ಪ್ರಸಾರ. ಆಸ್ಪತ್ರೆ ಇಲ್ಲದೆ ಗರ್ಭಿಣಿಯೊಬ್ಬಳ ಸಾವಾಗಿದೆ ಸಿನಿಮಾ ತಾರೆಯ ಸೀರೆ ಲುಕ್ ಕುರಿತು ಬಿಸಿ ಚರ್ಚೆ. ರೈತರು ಬೀದಿಯಲ್ಲಿ ಹೋರಾಟಕ್ಕೆ ಕುಳಿತಿದ್ದಾರೆ ಕ್ಯಾಮೆರಾಗಳು ಧಣಿಯ ಧ್ಯಾನದ ಕಡೆ ತಿರುಗಿವೆ. ಸೈನಿಕರು ದೇಶಕ್ಕಾಗಿ ಗುಂಡಿಗೆ ಬಲಿಯಾಗಿದ್ದಾರೆ ಮಂತ್ರಿಗಳ ಮೊಸಳೆ ಕಣ್ಣೀರು ಟಿವಿ ತುಂಬಿ ತುಳುಕುತ್ತಿವೆ.
----------------------------------
ನೋಂದಣಿ ಐಡಿ : KPFS2-8319