Submission 4707

ಕನ್ನಡದ ಸಿರಿಯನಿನ್ನೇನು ಬಣ್ಣಿಸಲಿ

ರಚನೆ : ರಂಜನ್ ಎಸ್ ಎನ್

----------------------------------

ಪಸರಿಸಲಿ ಎಲ್ಲೆಲ್ಲೂ ಕನ್ನಡದ ಸುಗಂಧ ಭಾಷೆಯಲಿ ಬೆಸೆದಿಹುದು ಭಾವನೆಯ ಬಂಧ ಮುತ್ತುಗಳ ರತ್ನಗಳ ಕೋದಂತಿಹ ಮಧುರ ಸ್ವರ ನೆತ್ತರೊಳು ಹರಿದಿಹುದು ಕನ್ನಡದ ಇಂಚರ ಭೂಲೋಕದೊಳು ಸ್ವರ್ಗವನು ತೋರಿಹುದು ಈ ಮಣ್ಣು ಸಹ್ಯಾದ್ರಿ ವನಸಿರಿಯೊಳಡಗಿಹುದು ಹೊನ್ನು ಸಿರಿಗಂಧ ಸಂಪಿಗೆ ಕೊನೆವೆತ್ತ ತೆಂಗು-ಕೌಂಗುಗಳು ಹೊದಿಸಿಹವು ಹಸಿರು ಮಕಮಲ್ಲಿನ ಜಮಖಾನೆಯನ್ನು ಚಿಗರಿಗಳು ಕುಣಿದಿಹವು ಕಾವ್ಯಗಳ ಮತ್ತಿನಲಿ ಶಾಸನಗಳರಳಿಹವು ದೇಗುಲಗಳ ಬಿತ್ತಿಯಲಿ ಕಬ್ಬಿಗರ ಕಬ್ಬಗಳ ಹಬ್ಬದ ಸವಿಯೂಟ ಶಿಲ್ಪಿಗಳ ಕಲೆಯಬಲೆ ಮಾಡಿಹುದು ಮಾಟ ಕನ್ನಡದ ನೆಲದೊಳುದಿಸಿ ಸಾರ್ಥಕವೀ ಬಾಳು ಈ ಸಿರಿಯನಿನ್ನೇನು ಪದಗಳಲಿ ಬಣ್ಣಿಸಲಿ ಹೇಳು

----------------------------------

ನೋಂದಣಿ ಐಡಿ : KPFS2-8312

325
Votes
1,597
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top