ಅದೇಕೆ ಹೀಗೆ?
ರಚನೆ : ಮಹೇಶ್ ಪಲ್ಲಕ್ಕಿ
----------------------------------
ಸಂಜೆಯ ಆಜಾನಿನ ಸದ್ದಿಗೆ ಊಳಿಡುವ ನಾಯಿ ಸಲಾತ್ ನ ವೇಳೆಗೆ ಕಿಟಕಿಯಿಂದ ಆಕಾಶದ ಕಡೆ ದೃಷ್ಟಿಯಿಟ್ಟು ಕೂತಿರುತ್ತದೆ. ಕಣ್ಣಿನಲಿ ಮಂದಹಾಸ, ಮುಖದಲಿ ನೆಮ್ಮದಿಯ ಸ್ಪುರಿಸುತ್ತಾ ತನ್ನೊಳಗೇ ಏನೋ ಮಾತಾಡಿಕೊಳ್ಳುತ್ತದೆ. ಸಂಜೆ ಏಳಕ್ಕೆ ಶುರುವಾಗುವ ನನ್ನ ದೈವದ ಮಂಗಳಾರತಿಗೂ ಎದ್ದು ಬಂದು ಶಿಸ್ತಿನಲಿ ಅಂಡೂರಿ ಕುಳಿಯುತ್ತದೆ. ಕಣ್ಣಿನಲಿ ಅದೇ ಮಂದಹಾಸ, ಮುಖದಲಿ ಅದೇ ನೆಮ್ಮದಿಯ ಛಾಪು, ಒಂಚೂರು ವ್ಯತ್ಯಾಸವಿಲ್ಲ. ಆದರೆ ಏಕೋ ನನ್ನ ಕಂಡರೆ ಅಸಡ್ಡೆ. ಯಾಕೆಂದು ಕೇಳಲು ನನಗೆ ಹಿಂಜರಿಕೆ!
----------------------------------
ನೋಂದಣಿ ಐಡಿ : KPFS2-8299