Submission 4669

ಬದುಕು

ರಚನೆ : ಪೂಜಾ ಷಣ್ಮುಖ

----------------------------------

ಮಲ್ಲಿಗೆ ಸಂಪಿಗೆ, ನಿನ್ನೊಲವು ಯಾರಿಗೆ ? ಶಿವನ ಜಡೆಗೋ ? ಹೆಣ್ಣಿನ ಮೂಡಿಗೋ ? ಕಿತ್ತಳೆ ಬಾಳೆ, ನೀವ್ಯಾರ ಸೇರುವಿರಿ ? ಶಿವನ ನೈವೇದ್ಯಕ್ಕೋ ? ಹಸಿದ ಜಠರಕ್ಕೋ ? ಹಾಲೇ, ಮೊಸರೇ, ನೀವ್ಯಾರ ಪಾಲೋ ? ಶಿವನ ಅಭಿಷೇಕಕ್ಕೋ ? ಸೊರಗಿದ ಗಂಟಲಿಗೋ ? ಧೂಪವೇ, ಕಾರ್ಪೂರವೇ , ನಿಮ್ಮ ತ್ಯಾಗ ಯಾರಿಗೆ ? ಶಿವನ ಪೂಜೆಗೋ ? ಮಸಣ ಸೇರುವ ದೇಹಕ್ಕೋ ? ಶಿವನೊಲುಮೆ ಬೇಕು, ಜಡ ದೇಹಕ್ಕೂ ಬೇಕಲ್ಲವೇ ? ಯಾರ್ಯಾರ ಪಾಲು ಯಾರಿಗೆ ? ತಿಳಿಯೋ ಸಮಯವೇ ಬದುಕಲ್ಲವೇ ?

----------------------------------

ನೋಂದಣಿ ಐಡಿ : KPFS2-8281

1
Votes
121
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top