ಅವ್ವ ನೀ ಬರೀ ಸುಳ್ಳು ಹೇಳತಿ
ರಚನೆ : ವಿಜಯ್ ಕುಮಾರ್ ಎಂ
----------------------------------
ಇದ್ದ ಅಡಗಿ ನನಗ ತಿನಿಸಿ ನಂಗ ಹಸಿವಿಲ್ಲ ಯಪ್ಪಾ ಅಂತಿ ನಾ ಮನ್ಯಾಗ ಇಲ್ಲಂದ್ರ ಹೋಳಗಿ ಮಾಡಲ್ಲ ಅಂತಿ ನಾ ಎಷ್ಟು ದಪ್ಪಾಗಿದ್ರೂ ಸೊರಗಿ ನೋಡ ಯಪ್ಪಾ ಅಂತಿ ಅವ್ವ ನೀ ಭಾಳ ಸುಳ್ಳು ಹೇಳತಿ ಎರಡು ರೊಟ್ಟಿ ಕಟ್ಟೀನಿ ಅಂತ ನಾಕಾ ಜನ ತಿನ್ನುವಷ್ಟು ಬುಟ್ಟಿಕಟ್ಟತಿ ಏನೂ ಇಲ್ಲ ಏನೂ ಇಲ್ಲ ಅಂತ ಹೇಳಿದ್ದು ಚೀಲದಾಗ ಉಪ್ಪಿನಕಾಯಿ ಬಾಟಲಿ ಇಡತಿ ಅವ್ವ ನೀ ಭಾಳ ಸುಳ್ಳು ಹೇಳತಿ ಅಪ್ಪ ಹೊಸ ಸೀರಿ ತಗೊಳ್ಳಕ್ಕ ರೊಕ್ಕ ಕೊಟ್ರ ಹಳೆ ಸೀರೆನ ಹೊಸದರಾಂಗ ಉಟ್ಕೋತಿ ಮನ್ಯಾಗ ಯಾರಿಗೂ ಗೊತ್ತಾಗದಂಗ ಅದೇ ರೊಕ್ಕ ನನಗ ಖರ್ಚಿಗೆ ಕೊಡ್ತಿ ಅವ್ವ ನೀ ಭಾಳ ಸುಳ್ಳ ಹೇಳತಿ
----------------------------------
ನೋಂದಣಿ ಐಡಿ : KPFS2-8215