Submission 4520

ಏನಾದೆ ನಾ!

ರಚನೆ : ವಿಸ್ಮಯಶ್ರೀ

----------------------------------

ಕಲ್ಲು ಮಣ್ಣು ಧೂಳಾಗಬಹುದಿತ್ತು ಸರಿ,ತಪ್ಪು, ಇಷ್ಟ, ಕಷ್ಟ, ಭಾವಗಳ ಬಂಧಿಯಾಗಿಬಿಟ್ಟೆ ಬೇರು, ಕಾಂಡ, ರೆಂಬೆ ಕೊಂಬೆ,ಎಲೆ, ಹೂ ಕಾಯಿ ಹಣ್ಣಾಗಬಹುದಿತ್ತು ಕನಸು, ನನಸು, ಮರೆವು, ನೆನಪುಗಳ ಮೂಟೆಯಾಗಿಬಿಟ್ಟೆ ಬೆಟ್ಟ, ಗುಡ್ಡ , ನೀರು, ನದಿ, ಜಲಚರ, ಪಾಚಿಯಾಗಬಹುದಿತ್ತು ಚಿತ್ರಿಸಿ, ಚಿಂತಿಸಿ, ಒಟ್ಟು ರಾಶಿಯಲ್ಲಿ ಬದುಕುವ ಜೀವಿಯಾಗಿಬಿಟ್ಟೆ ಬೆಕ್ಕು,ನಾಯಿ, ಹಸು, ಕೋಳಿ, ಹಾರುವ ಹಕ್ಕಿಯಾಗಬಹುದಿತ್ತು ಹೆಮ್ಮೆ, ಅಹಂಕಾರ, ಪ್ರತಿಷ್ಠೆಗಳ ಸಾಕುವ ಮನುಷ್ಯನಾಗಿಬಿಟ್ಟೆ

----------------------------------

ನೋಂದಣಿ ಐಡಿ : KPFS2-8168

1
Votes
104
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top