Submission 4480

ನಾನು - ನೀನು

ರಚನೆ : ಸುರೇಶ್ ಕುಮಾರ್ ಡಿ.ವಿ

----------------------------------

ನಾನು ನೀನಾಗಬೇಕೆಂದಿರುವಾಗ ನೀನು ನನ್ನನ್ನು ಪ್ರೀತಿಸುತ್ತಿರುವೆ ನಾನು ನಾನಾಗಿರಬಾರದೆಂದೇ ನಾನು ನಿನ್ನನ್ನು ಪ್ರೀತಿಸುತ್ತಿರುವೆ ನನ್ನೊಳಗಿನ ನಿನ್ನನ್ನು ನೀನಾಗಲು ನಿನ್ನೊಳಗಿನ ಪ್ರೀತಿಯೇ ಬಿಡುತ್ತಿಲ್ಲ ನಿನಗೆ ಬೇಕಾದಂತೆ, ನಾನು ನಾನಾಗಿಯೇ ಉಳಿದುಕೊಂಡರೆ, ಅದು ಖಂಡಿತ ನಾನಲ್ಲ. ಹೊರಗೆ ನಾನಾದರೂ, ಒಳಗಿರುವುದು ನೀನೇ ಹೊರಗೆ ನಾವಿಬ್ಬರು ಏನಾದರೂ ಒಳಗಿರುವ ಪ್ರೀತಿ ನಿಜ ತಾನೇ? ನಾನು ನೀನೇ ಏಕೆ ಪ್ರೀತಿಸಬೇಕು? ನಾನು - ನಾನುಗಳ ನೀನು - ನೀನುಗಳ ನಡುವೆ ಏಕೆ ಪ್ರೀತಿ ಮೂಡಬಾರದು?

----------------------------------

ನೋಂದಣಿ ಐಡಿ : KPFS2-8145

2
Votes
104
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top