Submission 4452

ಒಣಗದ-ಒಲವು

ರಚನೆ : ಮಂಜುನಾಥ ಟಿ ಎಂ

----------------------------------

ಬಂದದ್ರಲ್ಲೇ ಬದ್ಕಂಡು, ಖಾರ್ವೋ-ಪಾರ್ವೋ ಉಂಡ್ಕಂಡು, ಚೂರೋ-ಪಾರೋ ನಂಚ್ಕಂಡು, ‘ಬಾಳ-ಬಂಡಿ’ ನಡ್ಸೀವಿ || ಬಡತನದಲ್ಲೂ ಬೆರ್ಕಂಡು, ಬಂದ ನೋವ ಮರ್ಸ್ಕಂಡು, ಕಷ್ಟಕ್ಕೂ ಕಾಟ ಕೊಟ್ಟೀವಿ || ಜೀವುಕ್‌ ಜೀವ ಬೆಸ್ಕಂಡು, ಒಲವ-ಗೆಲುವ ಮೆರ್ಸ್ಕಂಡು, ‘ನಗೆಯ-ಚಿಲುಮೆ’ ಸೂಸೀವಿ || ನಂಗೆ ನೀನಲ್ವೆ, ನಿಂಗೆ ನಾನಲ್ವೆ? ಈ ನಡುವಣ-ನಲುಮೆ, ಸಿಹಿ ಜೇನಲ್ವೆ? ಆ ದಿಗಂತದ ದೂರ (ಸಂಸಾರ) ಪಯಣಿಸಲು, ಪ್ರೀತಿ-ಜ್ಯೋತಿಯೊಂದೇ ಸಾಕಲ್ವೆ?

----------------------------------

ನೋಂದಣಿ ಐಡಿ : KPFS2-8121

61
Votes
362
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top