ಬುದ್ಧಿ ಮತ್ತು ಹೃದಯದ ಹೋರಾಟ
ರಚನೆ : ಅನುರಾಧ
----------------------------------
ಬುದ್ಧಿ ಹೇಳಿತು – ಯೋಚನೆ ಮಾಡು, ಹೃದಯ ಹೇಳಿತು – ಅನುಭವಿಸಿ ನೋಡು. ಒಂದೇ ದೇಹದಲ್ಲಿ ಎರಡು ಲೋಕ, ಒಂದೇ ಗುರಿಗೆ ಎರಡು ದಾರಿ, ನಾನು ನಾವಿಕ. ಬುದ್ಧಿ ತರ್ಕದ ಸೇತುವೆ ಕಟ್ಟುತ್ತದೆ, ಹೃದಯ ಭಾವನೆಯ ನದಿ ಹರಿಸುತ್ತದೆ. ಒಬ್ಬನು ಹೇಳುತ್ತಾನೆ ಬಿಟ್ಟುಬಿಡು, ಇನ್ನೊಬ್ಬನು ಕೇಳುತ್ತಾನೆ “ಇನ್ನೂ ನಂಬು. ಯುದ್ಧ ಅಂತ್ಯವಿಲ್ಲದಂತಿದೆ, ಆದರೂ ಸತ್ಯ ಒಂದೇ — ಬುದ್ಧಿ ಗೆದ್ದಾಗ ಶಾಂತಿ ಸಿಗುತ್ತದೆ, ಹೃದಯ ಗೆದ್ದಾಗ ಪ್ರೀತಿ ಜೀವಿಸುತ್ತದೆ.
----------------------------------
ನೋಂದಣಿ ಐಡಿ : KPFS2-8115