ಬರಡು ಮನ
ರಚನೆ : ಬಸವರಾಜ ಎಸ್
----------------------------------
ಮನಸೊಂದು ಮರುಭೂಮಿಯಾಗಿದೆ ನೀರು, ಹಸಿರ ಹುಡುಕಬೇಕಲ್ಲವೇ? ಒಂಟೆಯಾಗಿದ್ದಿದ್ದರೆ ಗೊತ್ತಾಗುತ್ತಿತ್ತೇನೊ.. ಒಂಟಿಯಾಗಿರುವೆ... ಅಪರೂಪದ ನೀರ ಹುಡುಕುವುದು ಹೇಗೆ? ಬರಿಗಾಲಲಿ ನಡೆದು ಬರಡಾಗಿವೆ ಪಾದವೆ... ರಣ ರಣ ಬಿಸಿಲು ನೆತ್ತಿಯ ಸುಡುತ್ತಿಲ್ಲವೇ? ಸಾಗಬೇಕು ಹಾದಿ ನೀರ ಅರಸಿ ನಿಲ್ಲದೆ...
----------------------------------
ನೋಂದಣಿ ಐಡಿ : KPFS2-8105