ಓ ಮೋಡವೇ
ರಚನೆ : ಗಜೇಂದ್ರ ಬಿ ರಾಯನ್ ಕೊಡಕಣಿ
----------------------------------
ಓ ಮೋಡವೇ ನಾ ನಿನ್ನ ನೋಡುವೇ ನಾ ಹಾಡುವೇ ನಿನ್ನ ಜೊತೆ ನಾ ಸೇರುವೇ.. ರವಿಯ ಕಂಡರೆ ನೀ ಎದರುವೇ ಬಿಸಿಲ ಝಳಕ್ಕೆ ನೀ ಮರುಗುವೇ ನಿನ್ನ ಭಯವನ್ನು ನಾ ನೀಗಿಸುವೇ.. ಮಳೆಗಾಲದ ನಿನ್ನ ತವರಿಗೆ ನಾ ಕರೆದೊಯ್ಯುವೇ! ಭರಣಿ ಮಳೆಯೋ! ಅಸಲಿ ಮಳೆಯೋ! ಸ್ವಾತಿ ಮಳೆಯೋ! ಚಿತ್ತ ಮಳೆಯೋ! ಯಾವುದಾದರೇನು ನನಗೆ ನಿನ್ನ ಕಾಣಲು? ಧರಣಿಗೆ ಬಂದು ದಣಿವ ನೀಗಿಸಿ ತಂಪೆರೆದರೆ ಸಾಕಲ್ಲವೇ ನೀನು! ಓ ಮೋಡವೇ ನಾ ನಿನ್ನ ನೋಡುವೇ ನಾ ಹಾಡುವೇ ನಿನ್ನ ಜೊತೆ ನಾ ಸೇರುವೇ..
----------------------------------
ನೋಂದಣಿ ಐಡಿ : KPFS2-8097